ಹೋಗಿ ಬಾ ಗೆಳೆಯಾ, ಒಳ್ಳೆಯದಾಗಲಿ
ರವೀಂದ್ರನಾಥ ಟಾಗೋರ್ ಅವರ ಫೇರ್ವೆಲ್ ಮೈ ಫ್ರೆಂಡ್ ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆನ್ನುವುದು ನನ್ನ ಬಹುದಿನದ ಬಯಕೆ. ಆದರೆ ಈಗ ಅದರ ಹೆಸರನ್ನಾದರೂ ನಾನು ಸರಿಯಾಗಿ ಭಾಷಾಂತರಿಸಿದೆನೇ ಎನ್ನುವ ಸಂದೇಹ ಇದೆ.
ಲೇಖಕ ಚಿದಾನಂದ ಸಾಲಿ ಅವರ ಮುಂದೆ ಈ ಮಾತನ್ನು ಅನ್ನಬಾರದೇ ಅಂದು ಬಿಟ್ಟೆನೋ ಏನೋ. ಅವರು ನನ್ನನ್ನು ಬೆಂಬಿಡದೇ ಕಾಡುವ ಮಾತಾಡಿದ್ದಾರೆ. ಅವರು ಗೆಲ್ಲುತ್ತಾರೋ, ನಾನು ಗೆಲ್ಲುತ್ತೇನೋ ನೋಡಬೇಕು.
ಈ ಕಾದಂಬರಿ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಜೀನಿಯಸ್ ಎಂದಿದ್ದಾರೆ. ಕೆಲವರು ಸಾಧಾರಣ ಎಂದು ಮರೆತು ಬಿಟ್ಟಿದ್ದಾರೆ. ಆದರೆ ನನಗೆ ಇದು ಎಂದೂ ಮರೆಯದ ಅನುಭವವನ್ನು ನೀಡಿದೆ.
ಇದನ್ನು ಬೇರೆಯವರಿಗೆ ಹೇಳದೇ ಇದ್ದರೆ ಪಾಪ ಎನ್ನುವಷ್ಟು ನನ್ನನ್ನು ಇದು ಕಾಡಿದೆ. ಎಷ್ಟೋ ಜನ ಸ್ಹೇಹಿತರಿಗೆ ಇದನ್ನು ಹೇಳಿ ಹೇಳಿ ನಿದ್ದೆ ಕೆಡಿಸಿದ್ದೇನೆ. ಇವನು ಯಾಕಾದರೂ ಇದನ್ನು ಓದಿದನೋ ಅಂತಲೋ, ಅಥವಾ ನಾವು ಯಾಕಾದರೂ ಇವನ ಗೆಳೆಯರಾದೆವೋ ಅಂತ ಅವರಿಗೆ ಅನ್ನಿಸಿರಬಹುದು. ಅದನ್ನು ಕನ್ನಡದಲ್ಲಿ ಬರೆಯಬೇಕು ಅಂತಲೂ ಬಹಳ ಸಾರಿ ಅನ್ನಿಸಿದೆ.
ಬರೆಯಲಾರದ್ದಕ್ದೆ ಕಾರಣಗಳೇನೂ ಇಲ್ಲ. ಶಿಸ್ತು ಇರಲಾರದ್ದು, ಸೋಮಾರಿತನ, ಅಥವಾ ಯಾವಾನಿಗೆ ಬೇಕು ಅನ್ನುವ ಮನೋಭಾವ ಇರಬಹುದು.
ಈಗ ಮಾಡಲೇ ಬೇಕಾಗಿ ಬಂದಿದೆ.
ಈ ಕಾದಂಬರಿ ಟಾಗೋರರ ಯಯಾತಿಯಾಗುವ ಪ್ರಯತ್ನದ ಫಲ ಅಂತ ಯಾರೋ ಹೇಳಿದ್ದಾರೆ. ಇದನ್ನು ಬರೆದಿದ್ದು ಅವರು ತಾನು ಯುವಕರಿಗೇನು ಕಮ್ಮಿ ಅಂತ ತೋರಿಸಿಕೊಳ್ಳಲು ಅಂತ ಕೆಲವು ವಿಮರ್ಷಕರು ಹೇಳಿದ್ದಾರೆ. ಇದರ ಬಗ್ಗೆ ನನಗೆ ಯಾವ ಅಭಿಪ್ರಾಯವೂ ಇಲ್ಲ. ಪ್ರತೀ ಓದುಗನಿಗೆ ತನ್ನದೇ ಅಭಿಪ್ರಾಯ ಇರುತ್ತೆ, ಇರಬೇಕು.
ಇದಕ್ಕಿಂತ ಹೆಚ್ಚು ಬರೆಯಲು ಇಂದು ಆಗುತ್ತಿಲ್ಲ. ಮತ್ತೆ ಬರೆಯುತ್ತೇನೆ.
ಹೃಷಿ
ನಾನು, ಬಳ್ಳಾರಿ ಹಾಗು ನ್ಯೂಯಾರ್ಕ್ ಟೈಮ್ಸ್
-ನಾನು ಕೆಂಡಸಂಪಿಗೆ.ಕಾಂ ನಲ್ಲಿ ಬರೆದ ಲಲಿತ ಪ್ರಬಂಧಬಳ್ಳಾರಿ ಗಣಿದಣಿಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಜಿಮ್ ಯಾರ್ಡ್ಲಿ ಬರೆದದ್ದು ಲೋಕ ವಿಖ್ಯಾತವಾಗಿದೆ.ಆದರೆ ಅವರ ಜೊತೆಜೊತೆಗೇ ಇದ್ದ ನಮ್ಮ ಹೃಷಿಕೇಶ್ ದೇಸಾಯರು ಪಟ್ಟ ಪಡಿಪಾಟಲು ಇಲ್ಲಿದೆ.ಅಂದು ರಾತ್ರಿಪಾಳಿ ಮುಗಿಸಿ ಮಲಗಿದ್ದೆ. ಯಾರೋ ನನ್ನನ್ನು ಹಕ್ಕೊಂಡು ಹೊಡೆದಿದ್ದಾರೋ...
Dear Deepu,
Thank you. I will consider your wise words.
It sounds so much starting a news item from the second para. Let us see how we can take it forward.
I appreciate your willingness to translate that work. I wish you all the best. Every work has starting and ending points. When one cannot decide the starting point, it is better to fix the other and work backwards. I read somewhere that backward integration is a great project executor. Planning to bring out the book at some date relating to the Nobel laureate may also help.